ಸೌಜನ್ಯ ಪ್ರಕರಣದ ತೀರ್ಪು ಪ್ರಕಟ ಹಿನ್ನೆಲೆ ಮಹೇಶ್ ಶೆಟ್ಟಿ ಪ್ರತಿಕ್ರಿಯೆ

ದಕ್ಷಿಣ ಕನ್ನಡ: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ತೀರ್ಪು ಪ್ರಕಟ ಹಿನ್ನಲೆ ಹಿಂದೂ ಮುಖಂಡ ಮಹೇಶ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ನಡೆದ ತನಿಖೆಗಳೆಲ್ಲವೂ ಬೋಗಸ್ , ಅಣ್ಣಪ್ಪ ಇಲ್ಲವಾದರೆ ಮಂಜುನಾಥ ಈ ಕೇಸಿನಲ್ಲಿ ನ್ಯಾಯ ಕೊಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ನಡೆದ ತನಿಖೆಗಳೆಲ್ಲವೂ ಬೋಗಸ್ ಹತ್ತು ವರ್ಷ ಯಾರೋ ಹೇಳಿದ್ರು ಅಂತ ಆರೋಪಿಯನ್ನ ಜೈಲಿಗೆ ಹಾಕಿದ್ರು. 10 ವರ್ಷ ಅವನು ಜೈಲಲ್ಲಿದ್ದ ,ಅವನ ಯವ್ವನ ಗತಿ ಏನಾಯಿತು. ಅವನಿಗೆ ಇನ್ನು ಯಾರು ದಿಕ್ಕು ಅಂತ ಕೇಳೋದು. ಧರ್ಮಸ್ಥಳದವರು ಇಂತವ್ರು ಅಂತ ಹೇಳಿದ್ರೆ ಅವರು ಆರೋಪಿ, ಆದರೆ ಹುಡುಗಿಯ ಮನೆಯವರು ಹೇಳಿದ್ರೆ ಅವರು ಆರೋಪಿಗಳಲ್ಲ, ಈ ದೇಶದ ಸಂವಿಧಾನದಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ . ನಮ್ಮತ್ರ ದುಡ್ಡಿಲ್ಲ ,ನಮ್ಮತ್ರ ರಾಜಕೀಯ ಶಕ್ತಿಗಳಿಲ್ಲ . ಆದರೆ ನಮ್ಮ ಮನಸ್ಸಲ್ಲಿ ಆ ಬಡಪಾಯಿ ಹುಡುಗ ಹೊರಗಡೆ ಬರಲಿ ಅಂತ ಇತ್ತು ಎಂದು ತಿಮರೋಡಿ ಹೇಳಿದ್ರು.
ನಾನು ಕೈಯಾರೆ 3.5 ಲಕ್ಷ ಖರ್ಚು ಮಾಡಿ ಆತನನ್ನ ಬಿಡಿಸಿಕೊಂಡು ಬಂದಿದ್ದೆ. ಯಾಕೆಂದರೆ ಆತ ತಪ್ಪು ಮಾಡಿಲ್ಲವೆಂದು ನನಗೆ ತಿಳಿದಿತ್ತು. ಹಾಗಾದರೆ ತಪ್ಪು ಮಾಡಿದವರು ಯಾರು ..? ಸಂತೋಷ್ ಆರೋಪಿಯಲ್ಲ ಎಂದರೆ ನಮಗೆ ಸಂತೋಷದ ಸುದ್ದಿ. ಹಾಗಾದರೆ ಆರೋಪಿಗಳು ಯಾರು ..? ಎಂದು ಪ್ರಶ್ನಿಸಿದರು.
ನಮ್ಮ ಮೇಲೆ ಹಾಕಿದ ಕೇಸುಗಳು ಇನ್ನೂ ಬಾಕಿಯಿದೆ .ಎಲ್ಲಿ ನ್ಯಾಯ ಸಿಗುತ್ತೆ ನಮಗೆ ,ಇನ್ನೂ ದಾಖಲೆ ಮಾಡಲು ಸಾಧ್ಯವಿಲ್ಲ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw