11:38 PM Thursday 4 - December 2025

ಬೆಳ್ತಂಗಡಿ:  ಎಸೆಸೆಲ್ಸಿ ವಿದ್ಯಾರ್ಥಿಯ ನಿಗೂಢ ಸಾವು

21/11/2020

ಬೆಳ್ತಂಗಡಿ: ಆರಂಬೋಡಿ ಗ್ರಾಮದಲ್ಲಿ ಗುರುವಾರ ಎಸೆಸೆಲ್ಸಿ ವಿದ್ಯಾರ್ಥಿಯೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಬಗ್ಗೆ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರಂಬೋಡಿ ಗ್ರಾಮದ ಕೋಡ್ಯೆಲು ಮನೆ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರ ಸಮರ್ಥ್(16) ಮೃತಪಟ್ಟ ಬಾಲಕನಾಗಿದ್ದಾನೆ ಈತ ಸಿದ್ಧಕಟ್ಟೆ ಗುಣಶ್ರೀ ಆಂಗ್ಲಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.

ಗುರುವಾರ ಬೆಳಗ್ಗೆ ನೋಟ್ಸ್ ‌ಬುಕ್ ‌ತಿದ್ದುಪಡಿಗಾಗಿ ಶಾಲೆಗೆ ತೆರಳಿದ್ದನೆನ್ನಲಾಗಿದೆ. ಆದರೆ ಸಂಜೆಯವರೆಗೂ ಈತ ಹಿಂದಿರುಗದ ಹಿನ್ನೆಲೆಯಲ್ಲಿ ಮನೆಮಂದಿ ಹುಡುಕಿದಾಗ ಮನೆ ಸಮೀಪದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version