3:36 PM Saturday 25 - October 2025

ಚಂಡಮಾರುತ ಸಾಧ್ಯತೆ: ಪ್ರವಾಸಿಗರು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ

cyclone bipor joy
16/10/2023

ಉಡುಪಿ: ಭಾರತೀಯ ಹವಾಮಾನ ಇಲಾಖೆಯ ವರದಿಯಂತೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ, ಸಮುದ್ರದಲ್ಲಿ ಚಂಡಮಾರುತ ಬೀಸುವ ಸಂಭವವಿರುವುದರಿಂದ ಸಮುದ್ರದ ಅಲೆಗಳ ಎತ್ತರ ಹೆಚ್ಚಾಗಲಿದ್ದು ಮತ್ತು ಗಾಳಿಯ ವೇಗವು ಗಂಟೆಗೆ 40–45 ದಿಂದ 55 ಕಿ.ಮೀ ಇರುವುದರಿಂದ ಸಮುದ್ರವು ಪಕ್ಷಬ್ಬದತೆಯಿಂದ ಕೂಡಿರುತ್ತದೆ.

ಹಾಗಾಗಿ ಮುಂದಿನ 4 ದಿನಗಳ ಕಾಲ ಅಂದರೆ ಅ.20ವರೆಗೆ ಕರಾವಳಿ ತೀರದಲ್ಲಿ ಸಾರ್ವಜನಿಕರು, ಪ್ರವಾಸಿಗರು, ಮಕ್ಕಳು, ಸ್ಥಳೀಯರು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

ಸಮುದ್ರದ ಹತ್ತಿರ ಓಡಾಡುವುದು ಹಾಗೂ ಆಟವಾಡುವುದನ್ನು ಕೂಡಾ ನಿಷೇಧಿಸಿದೆ ಎಂದು ಉಡುಪಿ‌ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದರು.

ಇತ್ತೀಚಿನ ಸುದ್ದಿ

Exit mobile version