ಮೂರೇ ದಿನಕ್ಕೆ ಎಕ್ಕ, ಜೂನಿಯರ್ ಸಿನಿಮಾದ ದಾಖಲೆ ಪುಡಿಗಟ್ಟಿದ ‘ಸು ಫ್ರಮ್ ಸೋ’

su from so
28/07/2025

ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಬಿಡುಗಡೆಗೊಂಡು ಮೂರೇ ದಿನಕ್ಕೆ ಎಕ್ಕ, ಜೂನಿಯರ್ ಸಿನಿಮಾದ ದಾಖಲೆಯನ್ನು ಪುಡಿಗಟ್ಟಿದೆ.

ಮಂಗಳೂರಿನಲ್ಲಿ ಭಾನುವಾರ ಮತ್ತು ಸೋಮವಾರದ ಎಲ್ಲ ಟಿಕೆಟ್ ಗಳು ಸೋಲ್ಟ್ ಔಟ್ ಆಗಿವೆ. ಕನ್ನಡ ಚಿತ್ರರಂಗದಲ್ಲಿ ಬಹುದಿನಗಳ ನಂತರ ಒಂದೊಳ್ಳೆ ಸಿನಿಮಾ ಬಂದಿದೆ ಅಂತ ಜನರೇ ಕೊಂಡಾಡುತ್ತಿದ್ದಾರೆ.

ಸಿಂಗಲ್ ಸ್ಕ್ರೀನ್  ಥಿಯೇಟರ್ ಗಳು ಕೂಡ ಹೌಸ್ ಫುಲ್ ಆಗಿವೆ. ಈ ಚಿತ್ರದಿಂದ ರಾಜ್ ಬಿ ಶೆಟ್ಟಿ ದೊಡ್ಡ ಲಾಭ ಕಂಡಿದ್ದಾರೆ.  ಜುಲೈ 25ರಂದು ಬಿಡುಗಡೆಯಾಗಿದ್ದ ಸು ಫ್ರಮ್ ಸೋ ಚಿತ್ರದ ಟ್ರೈಲರ್ ಸಿನಿಮಾ ಪ್ರಿಯರನ್ನು ಮೋಡಿ ಮಾಡಿತ್ತು. ಹಾಸ್ಯ ಪ್ರಧಾನವಾದ ಚಿತ್ರವೊಂದು ಕನ್ನಡ ಚಿತ್ರರಂಗದಲ್ಲಿ ಬಹುದಿನಗಳ ನಂತರ ಭರ್ಜರಿ ಗೆಲುವು ದಾಖಲಿಸಿದೆ.

ಮೊದಲ ದಿನ 78 ಲಕ್ಷ ರೂ. ಕಲೆಕ್ಷನ್ ಮಾಡಿದ್ದ ಚಿತ್ರ, ಎರಡನೇ ದಿನ 2.17 ಕೋಟಿ ಗಳಿಸಿತು. ಮೂರನೇ ದಿನ 3.86 ಕೋಟಿ ಗಳಿಸಿದೆ. ಈ ಮೂಲಕ ಚಿತ್ರ ಬಿಡುಗಡೆಯಾಗಿ ಮೂರನೇ ದಿನಕ್ಕೆ 6.81 ಕೋಟಿ ಕಲೆಕ್ಷನ್ ಮಾಡಿದೆ. ವಿಶ್ವಮಟ್ಟದಲ್ಲಿ ಚಿತ್ರ 7.82 ಕೋಟಿ ರೂ. ಗಳಿಸಿದೆ. ಪ್ರಿಮಿಯರ್ ಶೋ ಗಳಿಕೆ ಕೂಡ ಸೇರಿದರೆ 8 ಕೋಟಿ ಕಲೆಕ್ಷನ್ ಮಾಡಿದ್ದು, ಇಂದು ಕೂಡ ಬಹುತೇಕ ಟಿಕೆಟ್ ಗಳು ಮಾರಾಟವಾಗಿವೆ. ಮಂಗಳೂರಿನಲ್ಲಿ ಟಿಕೆಟ್ ಸಿಗುತ್ತಿಲ್ಲ, 2 ದಿನಗಳ ಮುಂಚಿನ ಟಿಕೆಟ್ ಈಗಾಗಲೇ ಬುಕ್ ಆಗಿದ್ದು, ಸು ಫ್ರಮ್ ಸೋ ಭರ್ಜರಿ ಗೆಲುವಿನತ್ತ ದಾಪುಗಾಲು ಇಟ್ಟಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version