ಕಿಚ್ಚನನ್ನು ಮುಟ್ಟಲು ಸೋಮಣ್ಣರನ್ನು ಎಳೆದು ಹಾಕಿದ ಸುದೀಪ್ ಅಭಿಮಾನಿ!

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆಗೆ ಇಳಿದಿದ್ದು, ಜನರು ಬಿಜೆಪಿ ಅಭ್ಯರ್ಥಿಗಳಿಗಿಂತಲೂ ಕಿಚ್ಚ ಸುದೀಪ್ ಅವರನ್ನು ನೋಡಲು ಮುಗಿ ಬಿದ್ದ ಘಟನೆ ನಡೆದಿದೆ.
ನೆಚ್ಚಿನ ನಟನನ್ನು ಕಂಡ ಸಾವಿರಾರು ಅಭಿಮಾನಿಗಳಿಂದ ಕಿಚ್ಚ, ಕಿಚ್ಚ ಎಂದು ಘೋಷಣೆ ಕೂಗಿದರು. ಗುಂಡ್ಲುಪೇಟೆ ಪಟ್ಟಣದ ಬಸ್ ನಿಲ್ದಾಣದ ಬಳಿ ಅಭ್ಯರ್ಥಿ ನಿರಂಜನ್ ಕುಮಾರ ಪರ ಸುದೀಪ್ ಪ್ರಚಾರ ಮಾಡಿದರು. ಗೆದ್ದೇ ಗೆಲ್ಲೆವೆವು ನಾವು ಒಂದು ದಿನ– ಗೆಲ್ಲಲೇಬೇಕು ಒಳ್ಳೆತನ, ನೆವರ್ ಗಿವ್ ಅಪ್ ರೀತಿ ಸತತವಾಗಿ ಸೋತರು ಗೆದ್ದ ನಿರಂಜನಕುಮಾರ್ ಈ ಬಾರಿಯೂ ಗೆಲ್ಲಬೇಕು ಎಂದು ಸಿನಿಮಾ ಸ್ಟೈಲ್ ನಲ್ಲಿ ಕಿಚ್ಚ ಡೈಲಾಗ್ ಹೊಡೆದರು.
ವಿ.ಸೋಮಣ್ಣರನ್ನು ಎಳೆದು ಹಾಕಿದ ಸುದೀಪ್ ಅಭಿಮಾನಿ!
ಚಾಮರಾಜನಗರದ ಸಂತೇಮರಳ್ಳಿ ವೃತ್ತದಲ್ಲಿ ಸುದೀಪ್ ಜೊತೆ ತೆರಳುವ ವೇಳೆ ಅಭಿಮಾನಿಯೋರ್ವ ಕಿಚ್ಚ ಸುದೀಪ್ ಅವರನ್ನು ಮುಟ್ಟಲು ಬಂದಿದ್ದು, ಈ ವೇಳೆ ಮಿಸ್ ಆಗಿ ಸೋಮಣ್ಣರನ್ನು ಎಳೆದಿದ್ದಾನೆ. ಈ ವೇಳೆ ಪ್ರಚಾರ ವಾಹನದಿಂದ ಸೋಮಣ್ಣ ಜಾರಿದ್ದು, ತಕ್ಷಣವೇ ಸುದೀಪ್ ಸೋಮಣ್ಣ ಅವರನ್ನು ಬೀಳದಂತೆ ಹಿಡಿದುಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw