10:02 PM Wednesday 20 - August 2025

ಗರ್ಭಿಣಿ ಮೃತ್ಯು: ಆಸ್ಪತ್ರೆಗೆ ನುಗ್ಗಿ ಸಚಿವ ಸುಧಾಕರ್ ವಿರುದ್ಧ ಅವಾಚ್ಯ ಶಬ್ಧಗಳಿಂದ ಆಕ್ರೋಶ

sudhakar
08/05/2021

ಚಿಕ್ಕಬಳ್ಳಾಪುರ:  ಕೊವಿಡ್ ಸೋಂಕಿನಿಂದ ಮೃತಪಟ್ಟ  ಗರ್ಭಿಣಿಯ ಕುಟುಂಬಸ್ಥರು ಆಸ್ಪತ್ರೆಗೆ ನುಗ್ಗಿ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಅವಾಚ್ಯ ಪದಗಳಿಂದ ಆಕ್ರೋಶ ವ್ಯಕ್ತಪಡಿಸಿದ ಘಟನೆ  ನಡೆದಿದೆ.

 ಕೋವಿಡ್ ಸೋಂಕಿನಿಂದ ಚಿಂತಾಮಣಿ ತಾಲ್ಲೂಕು ಮಲ್ಲಿಕಾರ್ಜುನಪುರದ ಗರ್ಭಿಣಿ ಅನುಪಮಾ ಗುರುವಾರ ಸಾವನ್ನಪ್ಪಿದ್ದರು.  ನಗರದ ಹಳೇ ಜಿಲ್ಲಾಸ್ಪತ್ರೆ ಕೋವಿಡ್ ಕೇರ್ ಸೆಂಟರ್ ಗೆ ನುಗ್ಗಿದ ಮೃತಳ ಅಣ್ಣ ಬೈರೇಗೌಡ, ಸಂಬಂಧಿ ದೇವರಾಜು, ತಂದೆ ಗಣೇಶಪ್ಪ ಹಾಗೂ ಇತರರು ಆಸ್ಪತ್ರೆ ಆವರಣಕ್ಕೆ ನುಗ್ಗಿದ್ದಲ್ಲದೇ ಗದ್ದಲ ಸೃಷ್ಟಿಸಿ , ಕೊವಿಡ್ ನಿಯಮ ಉಲ್ಲಂಘಿಸಿ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಮೃತರ ಕುಟುಂಬಸ್ಥರ ಮೇಲೆ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version