7:40 PM Tuesday 2 - September 2025

ಸುಳ್ಯ: ಮೇನಾಲ ಕಲ್ಲಗುಡ್ಡೆ ಸ್ಮಶಾನಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ

ajjavara
15/03/2024

ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲ ಕಲ್ಲಗುಡ್ಡೆಯಲ್ಲಿರುವ ಸ್ಮಶಾನದ ಉಳಿವಿಗಾಗಿ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಧ್ವನಿಯೆತ್ತಿತ್ತು. ಈ ಬಗ್ಗೆ ಅಜ್ಜಾವರ ಗ್ರಾಮ ಸಭೆಯಲ್ಲಿ ಸಂಘಟನೆಯ ಮುಖಂಡರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಇದೀಗ ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ  ಸ್ಪಂದಿಸಿದೆ.

ಗ್ರಾಮ ಪಂಚಾಯತಿನ ಅಧ್ಯಕ್ಷರು ಮತ್ತು ಪಂಚಾಯತ್ ಸದಸ್ಯರು ಸಂಘಟನೆಯವರಿಗೆ ಪತ್ರಕ್ಕೆ ಸಹಿ ಹಾಕಿ ಕೊಟ್ಟು ಸ್ಮಶಾನ ಉಳಿಸಿ ಕೊಡುವ ಭರವಸೆ ನೀಡಿದ್ದರು.  ಈ ನಡುವೆ ಸಂಘಟನೆಯು ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿ ಸ್ಮಶಾನ ಉಳಿಸಿಕೊಡಲು ಮನವಿ ಸಲ್ಲಿಸಿದ್ದರು.

ಶುಕ್ರವಾರ ಸುಳ್ಯ ತಾಲೂಕು  ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಉಮಾದೇವಿ ಜಿ.ಕೆ.ಮತ್ತು ಪ್ರವೀಣ್ ರವರು ಕಲ್ಲಗುಡ್ಡೆ ಸ್ಮಶಾನದ ಜಾಗಕ್ಕೆ ಬಂದು ಪರಿಶೀಲನೆ ಮಾಡಿ ದಂಡಾಧಿಕಾರಿಗಳ ಗಮನಕ್ಕೆ ತಂದು ಸ್ಮಶಾನ ಜಾಗ ಉಳಿಸಿ ಕೊಡುತ್ತೆವೆ ಎಂಬ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅಂಬೇಡ್ಕರ್  ಆದರ್ಶ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ. ಪಲ್ಲತ್ತಡ್ಕ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಅಜ್ಜಾವರ ಘಟಕದ ಅಧ್ಯಕ್ಷರಾದ ಹರೀಶ್ ಮೇನಾಲ, ಸ್ಥಳಿಯ ನಿವಾಸಿಗಳಾದ ಗೋಪಾಲ ಕರಿಯಮೂಲೆ, ಹಾಗೂ ಕೃಷ್ಣಪ್ಪ ಪಿ.ಸಿ.ಪಲ್ಲತ್ತಡ್ಕ  ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version