ನವದೆಹಲಿ: ಕಾಣೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿದ ಮಹಿಳಾ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಅವರಿಗೆ ವಿಶೇಷ ಬಡ್ತಿ ನೀಡಲಾಗಿದ್ದು, ಔಟ್ ಆಫ್ ಟರ್ನ್ ಪ್ರಮೋಷನ್ ಅಡಿಯಲ್ಲಿ ವಿಶೇಷ ಬಡ್ತಿ ಪಡೆದ ದೆಹಲಿಯ ಮೊದಲ ಪೊಲೀಸ್ ಎಂಬ ಖ್ಯಾತಿಗೆ ಮಹಿಳಾ ಹೆಡ್ ಕಾನ್ಸ್ ಟೇಬಲ್ ಒಬ್ಬರು ಪಾತ್ರರಾಗಿದ್ದಾರೆ. ಸಮಯ್ ಪುರ ಬಾಡ್ಲಿ ಪೊಲೀಸ್ ಠಾಣೆಯ ಹೆ...
ಬೆಂಗಳೂರು: ಜನರ ತೆರಿಗೆ ಹಣ ಪಡೆದು ಸರಿಯಾದ ರಾಷ್ಟ್ರೀಯ ಹೆದ್ದಾರಿ ಮಾಡುವ ಯೋಗ್ಯತೆ ಇಲ್ಲದ ಸರ್ಕಾರ ಜನರ ಸುಗಮ ಸಂಚಾರಕ್ಕೆ ಆಗಾಗ ತಡೆಯಾಗುತ್ತಿದೆ. ಜನರಂತೂ ನಾನು ಆ ಪಕ್ಷ, ನೀನು ಈ ಪಕ್ಷ ಎಂದು ಹೊಡೆದಾಡುತ್ತಿರುವುದರ ನಡುವೆಯೇ ಜನರ ಪ್ರಾಣ ಹಿಂಡುವ ಜಿಗಣೆಗಳಂತೆ ಟೋಲ್ ಸಂಗ್ರಹ ಗುತ್ತಿಗೆ ಕಂಪೆನಿಗಳು ವರ್ತಿಸುತ್ತಿವೆ. ಈಗಾಗಲೇ ಟೋಲ್ ಸಂ...
ಬೆಂಗಳೂರು: ದೆಹಲಿಗೆ ಪ್ರಯಾಣಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ನಿರಾಸೆಯಿಂದ ವಾಪಸ್ ಬಂದಿದ್ದು, ಅಮಿತ್ ಶಾ ಭೇಟಿಗೆ ಅವರಿಗೆ ಅವಕಾಶ ಸಿಗಲಿಲ್ಲ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಅವರ ಜೊತೆಗೆ ಕೇವಲ 15 ನಿಮಿಷ ಚರ್ಚೆ ನಡೆಸಿ ಅವರು ವಾಪಸ್ ಆಗಿದ್ದಾರೆ ಎಂದು ವರದಿಯಾಗಿದೆ. ಬಿಎಸ್ ವೈ ಅವರು ಸಂಪುಟ ವಿಸ್ತರಣೆ ಸಂಬಂಧ ಅಮಿತ್ ಶಾ ಅವರನ್...
ಬಾರ್ಮರ್: ರಾಜಸ್ಥಾನ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ತನ್ನ ಸೊಸೆಯ ಪರವಾಗಿ 80 ವರ್ಷದ ಅತ್ತೆ, ಕೋಲು ಹಿಡಿದು ಬೀದಿಗೆ ಇಳಿದು ಪ್ರಚಾರದಲ್ಲಿ ತೊಡಗಿದ ಅಪರೂಪದ ಘಟನೆಯೊಂದು ವರದಿಯಾಗಿದೆ. ಸಿಗರತಿ ದೇವಿ ಅವರು ತಮ್ಮ ಸೊಸೆ ಮೂಲಿ ಚೌಧರಿ ಅವರ ಪರವಾಗಿ ಮನೆ ಮನೆಗಳಿಗೆ ತೆರಳಿ ಪ್ರಚಾರ ಆರಂಭಿಸಿದ್ದಾರೆ. ತನ್ನ ಸೊಸೆ ಪಂಚಾಯತ್ ಚ...
ನೆಲಮಂಗಲ: ಬೆಂಗಳೂರಿನಲ್ಲಿ ಬೆಳ್ಳಂಬೆಳಗೆ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ನೆಲಮಂಗಲದಲ್ಲಿ ನಡೆದಿದೆ. ಲಾರಿ ಚಾಲಕನೋರ್ವ ವೇಗವಾಗಿ ಚಲಿಸುತ್ತಾ, ಏಕಾಏಕಿ ಬ್ರೇಕ್ ಹಾಕಿದ್ದು, ಈ ಸಂದರ್ಭದಲ್ಲಿ ಲಾರಿಯ ಹಿಂದಿನಿಂದ ಬರುತ್ತಿದ್ದ ಓಮ್ನಿ ಲಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಓಮ್ಲ...
ಮಂಗಳೂರು: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್ ಹಾಗೂ ಮುಲ್ಕಿ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳು ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿತು. ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋ...
ಉಡುಪಿ: ಎಟಿಎಂ ಕಾರ್ಡ್ ಇಲ್ಲದೇ, ಯಾವುದೇ ಬ್ಯಾಂಕ್ ದಾಖಲೆ ಕೂಡ ಇಲ್ಲದೇ ವ್ಯಕ್ತಿಯೊಬ್ಬರ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ಹಣ ವಿತ್ ಡ್ರಾ ಮಾಡಿರುವ ಆತಂಕಕಾರರಿ ಘಟನೆ ನಡೆದಿದೆ. ಇದೊಂದು ವಿಚಿತ್ರ ಪ್ರಕರಣವಾಗಿದೆ. ಉಡುಪಿ ಮೂಲದ ಮೂಡುಬೆಟ್ಟು ನಿವಾಸಿ ಸದಾನಂದ ಭಂಡಾರಿ(62) ಅವರ ಕೆನರಾ ಬ್ಯಾಂಕ್ ಖಾತೆಯಿಂದ ಬೆಂಗಳೂರಿನ ಅಲಂಕಾರ್ ಫ್ಲಾಜ...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬಿಡನ್ ಅವರ ಸಂಪುಟಕ್ಕೆ ಕರ್ನಾಟಕದ ಮಂಡ್ಯ ಮೂಲದ ಕನ್ನಡಿಗ ಡಾ.ವಿವೇಕ್ ಮೂರ್ತಿ ಅವರು ಸೇರ್ಪಡೆಗೊಳ್ಳುವ ಸಾಧ್ಯತೆಗಳಿದ್ದು, ಅವರಿಗೆ ಉನ್ನತ ಸ್ಥಾನ ದೊರೆಯುವ ಸಾಧ್ಯತೆ ಕಂಡು ಬಂದಿದೆ. ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಹುದ್ದೆಗೆ ನೇಮಕವಾಗಬಹುದು ಡಾ.ವಿವೇಕ್ ಮೂರ್ತಿ ಅವರು ಆಯ...
ಮಂಡ್ಯ: ಯುವತಿಯ ಅಂಗಾಂಗ ಕತ್ತರಿಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದ್ದು, ಹತ್ಯೆಯ ಬಳಿಕ ಹೇಮಾವತಿ ನದಿಗೆ ಯುವತಿಯ ದೇಹದ ಭಾಗಗಳನ್ನು ಎಸೆಯಲಾಗಿದೆ. ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಬಂಡಿಹೊಳೆ ಬಳಿಯಲ್ಲಿ ಈ ಘಟನೆ ನಡೆದಿದೆ. ಈ ಕೃತ್ಯ ಎರಡು ದಿನಗಳ ಹಿಂದೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಯುವತಿಯ ದೇಹದ ಅಂಗಗಳು ನೀರಿನಲ...
ಜೈಪುರ: ಮರುಮದುವೆಗೆ ಸೊಸೆ ಒಪ್ಪಲಿಲ್ಲ ಎನ್ನುವ ಕಾರಣಕ್ಕಾಗಿ ಗಂಡನ ಮನೆಯವರು ಸೊಸೆಯ ಮೂಗು, ನಾಲಿಗೆಯನ್ನು ಕೊಯ್ದ ಆಘಾತಕಾರಿ ಘಟನೆ ರಾಜಸ್ಥಾನದ ಜೈಸಲ್ಮೇರ್ನಲ್ಲಿ ನಡೆದಿದ್ದು, ಸೊಸೆ ಇದೀಗ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಂಗಳವಾರ ಈ ಘಟನೆ ನಡೆದಿದ್ದು, 30 ವರ್ಷದ ವಿಧವೆ ಸೊಸೆಗೆ ಆಕೆಯ ಗಂಡನ ಮನೆ...