ಮೊಗ್ಗಲ್ಲಾನು ಗೌತಮ ಬುದ್ಧರೊಡನೆ ಭಿಕ್ಷೆಗೆ ಹೋದನು. ಈ ಸಂದರ್ಭದಲ್ಲಿ ಒಬ್ಬ ವರ್ತಕ ಭಿಕ್ಷುಕರಾದ ಇವರನ್ನು ವಿರೋಧಿಸುತ್ತಾನೆ. ಆಗ ಬುದ್ಧರು, “ವರ್ತಕನೆ ಕ್ಷಮಿಸು, ನೀನು ಸಂಜೆ ವಿಹಾರಕ್ಕೆ ಬಂದು ನಮ್ಮ ಆತಿಥ್ಯ ಸ್ವೀಕರಿಸು” ಎಂದು ಆಹ್ವಾನಿಸುತ್ತಾರೆ. ಸಂಜೆ ವರ್ತಕ ವಿಹಾರಕ್ಕೆ ಬರುತ್ತಾನೆ. ಆತನಿಗೆ ಉತ್ತಮ ಭೋಜನವನ್ನು ಬುದ್ಧರು ನೀಡುತ್...