ಗದಗ: ಪಟ್ಟಣದಲ್ಲಿ ಸೋಮವಾರ ಮಾತು ಬಾರದ, ಕಿವಿಯೂ ಕೇಳದ ಯುವಕನನ್ನು ಪದವೀಧರ ಯುವತಿ ಮದುವೆಯಾಗಿದ್ದಾರೆ. ನರಗುಂದ ಪಟ್ಟಣದ ದಂಡಾಪುರ ಬಡಾವಣೆಯ ಲಾಲಮಹಮ್ಮದ್, ಆರೀಫಾಭಾನು ದಂಪತಿ ಪುತ್ರ ಮಹಮ್ಮದ್ ಸಾಧಿಕ್ ಹಾಗೂ ಗದುಗಿನ ಗಂಗಿಮಡಿ ಬಡಾವಣೆಯ ಮಲೀಕಸಾಬ್-ಮಮತಾಜ್ಬೇಗಂ ಪಲ್ಲೇದ ದಂಪತಿ ಪುತ್ರಿ ಸುಮಯ್ಯಾ ರವಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿ...