ಮೈಸೂರು: ಇಲ್ಲಿನ ಅಗ್ರಹಾರ ವಾರ್ಡ್ 51ರಲ್ಲಿ ಕಳೆದ 10 ದಿನಗಳಿಂದಲೂ ಹೊಟ್ಟೆನೋವು, ವಾಂತಿ, ಭೇದಿ ಪ್ರಕರಣಗಳು ಹೆಚ್ಚುತ್ತಿದ್ದು, ಇಲ್ಲಿಗೆ ಸರಬರಾಜಾಗುತ್ತಿರುವ ನೀರಿನಿಂದಾಗಿ ಸಮಸ್ಯೆ ಉದ್ಬವವಾಗಿದೆ ಎನ್ನುವ ಅನುಮಾನಗಳು ಇದೀಗ ಕೇಳಿ ಬಂದಿವೆ. ಈ ವಾರ್ಡಿನಿಂದ ಕುಡಿಯುವ ನೀರಿನ 24 ಮಾದರಿಗಳನ್ನು ಇಲ್ಲಿನ ವಾಣಿವಿಲಾಸ ನೀರು ಸರಬರಾಜು ಕ...