ಕಿಚ್ಚ ಸುದೀಪ್ ವಿರುದ್ದ ಹರಿಹಾಯ್ದಿದ್ದ ಹಿಂದಿ ನಟ ಅಜಯ್ ದೇವಗನ್ ಇದೀಗ ಕಿಚ್ಚನ ಪ್ರತಿಕ್ರಿಯೆಗೆ ಒಂದೇ ಬಾರಿಗೆ ತನ್ನ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದು, “ಅನುವಾದದಲ್ಲಿ ಏನೋ ತಪ್ಪಾಗಿದೆ” ಎಂದು ಹೇಳುವ ಮೂಲಕ ಚರ್ಚೆಯಿಂದ ಹಿಂದಕ್ಕೆ ಸರಿದಿದ್ದಾರೆ. ಸಂದರ್ಶನವೊಂದಲ್ಲಿ ಮಾತನಾಡಿದ್ದ ಸುದೀಪ್, ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ. ...