ಧಮ್ಮಪ್ರಿಯಾ, ಬೆಂಗಳೂರು ಅಂಬರ ದಿನನಿತ್ಯ ಒಂದಲ್ಲ ಒಂದು ಚಿಂತೆಯಲ್ಲಿ ಮಗ್ನಳಾಗಿದ್ದು ತುಂಬು ಮೈಕಟ್ಟಿನ, ಸುಂದರ ನಗುಮುಖದ, ಮುಖಕ್ಕೆ ಸುಂದರವಾಗಿ ಕಾಣುವ ಮೂಗುತಿ ತೊಟ್ಟ ಸುಂದರಿ. ಸೀರೆಯಲ್ಲಿ ಎಲ್ಲರನ್ನೂ ಮೀರಿಸುವ ನೀರೆ, ಇವಳ ನಗುವೇ ಕೆಲವರಿಗೆ ಮಂದಹಾಸ, ಇವಳ ಮೈ ಮಾಟವೇ ಕೆಲವರಿಗೆ ಹಬ್ಬದ ಊಟ, ನೋಡಲು ಹಾಗಿದ್ದಳು ಅಂಬರ, ಇವಳು ಕೆ...