ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಈ ಪೈಕಿ ಟಾಪರ್ ಗಳಲ್ಲಿ ಒಬ್ಬರಾಗಿರುವ ಬಡ ದಲಿತ ಕುಟುಂಬದ ಅಮಿತ್ ಮಾದಾರ್(Amit Madar) ಅವರ ಸಾಧನೆ ಅವರ ಊರಿಗೆ ಮಾತ್ರವಲ್ಲದೇ ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಚಾರವಾಗಿದೆ. ಮಾತ್ರವಲ್ಲ ಇಡೀ ರಾಜ್ಯವೇ ಖುಷಿ ಪಡುವ ವಿಚಾರ ಕೂಡ ಆಗಿದೆ. ಹುಬ...