ರಾಜಸ್ಥಾನ: ವರದಕ್ಷಿಣೆ ನೀಡಲು ಕೂಡಿಟ್ಟ 75 ಲಕ್ಷ ರೂಪಾಯಿಯನ್ನು ಯುವತಿಯೋರ್ವರು ಮಹಿಳೆಯರ ಹಾಸ್ಟೆಲ್ ನಿರ್ಮಾಣಕ್ಕೆ ದಾನವಾಗಿ ನೀಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ತನ್ನ ತಂದೆಯ ಸಹಕಾರದೊಂದಿಗೆ ಮಹಿಳೆಯರಿಗೆ ಉಚಿತ ಹಾಸ್ಟೆಲ್ ನಿರ್ಮಾಣಕ್ಕೆ ಯುವತಿ ಮುಂದಾಗಿದ್ದಾರೆ. ಇಲ್ಲಿನ ಬಾರ್ಮರ್ ನಗರದ ಕಿಶೋರ್ ಸಿಂಗ್ ಕಾನೋಡ್ ಅವರ ಮಗಳಾಗಿರು...