ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷ ದುರ್ಬಲವಾಗುತ್ತಿರುವ ಸಾಂವಿಧಾನಿಕ ವ್ಯವಸ್ಥೆಯ ಸಂಕೇತವಾಗಿದೆ ಮೂಲ : ಪಿ.ಡಿ.ಟಿ. ಆಚಾರಿ Governors Do Not Have Executive Powers. –- ದ ವೈರ್ 14-11-2022 ಅನುವಾದ : ನಾ ದಿವಾಕರ ದೇಶದಲ್ಲಿ ಇತ್ತೀಚೆಗೆ ಕೆಲವು ರಾಜ್ಯಪಾಲರ ವರ್ತನೆಗಳು ತೀವ್ರ ಸಾರ...