ಮದ್ರಸಾದಿಂದ ತರಗತಿ ಮುಗಿಸಿಕೊಂಡು ಮನೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಬೈಕ್ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಅರಂಬೂರು ಸಮೀಪದ ಪಾಲಡ್ಕ ಎಂಬಲ್ಲಿ ನಡೆದಿದೆ. ಪಾಲಡ್ಕ ನಿವಾಸಿ ರಶೀದ್ ಎಂಬವರ ಪುತ್ರಿ ಆಯಿಷಾ ರಿಫಾ (6 )ಮೃತಪಟ್ಟ ಬಾಲಕಿ. ಇಂದುಬೆಳಗ್ಗೆ ಮದರಸದ...