ಬೈಂದೂರು: ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಉಪ್ಪುಂದ ಗ್ರಾಮದ 71 ವರ್ಷದ ನಾರಾಯಣ ಪೂಜಾರಿ ಆತ್ಮಹತ್ಯೆಗೆ ಶರಣಾದ ವೃದ್ಧ. ಇವರು ಪೊಲೀಯೋ ಪೀಡಿತರಾಗಿದ್ದು, ಸುಮಾರು 2 ವರ್ಷದ ಹಿಂದೆ ಜಾರಿ ಬಿದ್ದ ಪರಿಣಾಮ...