ಮೈಸೂರು: 14 ಬಾರಿ ದಸರಾ ಅಂಬಾರಿ ಹೊತ್ತಿದ್ದ ದಸರಾ ಆನೆ ಬಲರಾಮ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಬಲರಾಮನಿಗೆ ಕಣ್ಣೀರಿನ ವಿದಾಯ ಹೇಳಲಾಯಿತು. ಹಲವು ದಿನಗಳಿಂದ ಆಹಾರ, ನೀರು ಸೇವಿಸಲಾಗದೇ ಬಲರಾಮ ಕಂಗೆಟ್ಟಿದ್ದ. ಏನೇ ಸೇವಿಸಿದರೂ ವಾಂತಿಯಾಗುತ್ತಿತ್ತು. ಪಶುವೈದ್ಯರು ಪರಿಶೀಲಿಸಿದಾಗ ಒಣಗಿದ ಮರದ ಚೂಪಾದ ಕವಟ...