ಆನ್ ಲೈನ್ ಜೂಜಾಟದ ಗೇಮ್ ಗಳನ್ನು ನಿಷೇಧಿಸಲು ತಮಿಳುನಾಡು ಸರ್ಕಾರ ಚಿಂತನೆ ನಡೆಸಿದ್ದು, ರಾಜ್ಯದಲ್ಲಿ ಜೂಜಿನ ಆನ್ ಲೈನ್ ಗೇಮಿಂಗ್ ನಿಂದ ಸಾಕಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಚಿಂತನೆ ನಡೆಸಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಈ ವರ್ಷವೊಂದರಲ್ಲೇ ಆನ್ ಲೈನ್ ಜೂಜು ಗೇಮಿಂಗ್ ನ ವ...