ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗಿಕರಣ ವಿರೋಧಿಸಿ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್ ಬಿಯು) ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಈ ಕಾರಣದಿಂದಾಗಿ 4 ದಿನಗಳ ಕಾಲ ಬ್ಯಾಂಕ್ ಗಳು ತೆರೆಯುವುದಿಲ್ಲ. ಮಾರ್ಚ್ 15 ಮತ್ತು 16ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಮಾರ್ಚ್ 13ರಂದು ಎರಡನೇ ಶನಿವಾರವಾಗ...