ಅಥಣಿ: ಮದ್ಯದಂಗಡಿಯ ಸೆಕ್ಯೂರಿಟಿ ಗಾರ್ಡ್ ನ ಕೈ ಕಾಲು ಕಟ್ಟಿ ಹಾಕಿ ನಾಲ್ಕೂವರೆ ಲಕ್ಷ ರೂಪಾಯಿಗಳನ್ನು ಕಳವು ಮಾಡಿರುವ ಘಟನೆ ಬೆಳಗಾವಿಯ ಅಥಣಿಯಲ್ಲಿ ನಡೆದಿದ್ದು, ಗುರುವಾರ ತಡ ರಾತ್ರಿ ಕಳ್ಳರು ಈ ದುಷ್ಕೃತ್ಯ ನಡೆಸಿದ್ದಾರೆ. ಅಥಣಿ ಪಟ್ಟಣದ ಹೊರವಲಯದ ಕೆಟಗೇರಿ ಗ್ರಾಮದಕ್ಕೆ ಹೊಂದಿಕೊಂಡಿರುವ ಮಾರ್ಗದಲ್ಲಿ ವೆಂಕಟೇಶ್ವರ ವೈನ್ ಶಾಪ್ ಇದೆ. ...