ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 30 ವರ್ಷದ ಬಿನ್ಸಿ ಶೈಜು ಥೋಮಸ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ವಿವಾಹಿತರಾಗಿದ್ದು, ಇವರ ಗಂಡ ಉದ್ಯೋಗದ ನಿಮಿತ್ತ ದುಬೈಯಲ್ಲಿದ್ದರು. ಹೀಗಾಗಿ ಬಿನ್ಸಿ ಅವರು ಮಗಳೊಂದಿಗೆ ಗಂಡನ ಮನೆಯಾ...