ಮೂಲ : From cult to culture- Hindutva’s caste masterstroke ದೇವ್ದತ್ ಪಟ್ಟನಾಯಕ್- ದ ಹಿಂದೂ 2-1-22 ಜಾತ್ಯತೀತ ಮೌಲ್ಯಗಳ ಪ್ರತಿಪಾದಕರು ಹಿಂದೂ ಮತ್ತು ಹಿಂದುತ್ವವಾದಿಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ಆರಂಭಿಸಿರುವ ಹಿನ್ನೆಲೆಯಲ್ಲಿ ಬೌದ್ಧಿಕ ವಲಯದಲ್ಲಿ ಸಂಚಲನ ಉಂಟಾಗುತ್ತಿದೆ. ಈ ಸೂಕ್ಷ್ಮ ಆಧ್ಯಾತ್ಮಿಕ ವ್ಯತ್ಯಾಸಗ...