ಆಧುನಿಕ ಜೀವನಕ್ಕೆ ಹೊಂದಿಕೊಂಡಿರುವ ಜನರು ತಮ್ಮ ಬಾಯಾರಿಕೆ ನೀಗಿಸಲು ದೊಡ್ಡ ದೊಡ್ಡ ಕಂಪೆನಿಗಳ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ಪಾರ್ಕ್, ಬೀಚ್ ಗಳಲ್ಲಿ ಎಳನೀರು ಮಾರುವವರು ಕಂಡು ಬರುತ್ತಿದ್ದರೆ, ಈಗಿನ ಕಾಲದಲ್ಲಿ ಬೇರೆ ಬೇರೆ ಕಂಪೆನಿಗಳ ಬಣ್ಣ ಬಣ್ಣದ ವರ್ಣರಂಜಿತ ಪಾನೀಯಗಳ ದರ್ಶನವಾಗುತ್ತದೆ. ಈ ಪಾನೀಯಗಳು ಎಷ್ಟು ಸ...