ಚಿತ್ರದುರ್ಗ: ನಿರಂತರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿಗೆ ಕಾರಣೀಭೂತರಾಗಿದ್ದ ಎಂ.ಜಯಣ್ಣ (70) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಇವರು ದಲಿತ ಸಂಘರ್ಷ ಸಮಿತಿಯ ಸಂಸ್ಥಾಪರಾದ ಪ್ರೊ.ಬಿ ಕೃಷ್ಣಪ್ಪರವರ ಗರಡಿಯಲ್ಲಿ ಬೆಳೆದು ದಸಂಸ ರಾಜ್ಯ ಸಂಚಾಲಕರಾಗಿದ್ದರು. ದಲ...