ಭಾರತ ದೇಶದಲ್ಲಿ ಅಥವಾ ಕರ್ನಾಟಕ ರಾಜ್ಯದಲ್ಲಿ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ದೇಶದ ಮತ್ತು ರಾಜ್ಯದ ಜನ ನಾಯಕರುಗಳಿಗೆ ದಲಿತರ ಬಗ್ಗೆ ಅಪಾರವಾದ ಕಾಳಜಿ ಎಲ್ಲಿಲ್ಲದೆ ಉಕ್ಕಿ ಬಂದುಬಿಡುತ್ತದೆ. ಅಂತಹ ಅದೆಷ್ಟೋ ಘಟನೆಗಳು, ಘೋಷಣೆಗಳು, ದಲಿತರ ಕಾಳಜಿಗಳ ಬಗೆಗಿನ ಹೇಳಿಕೆಗಳು ದಿನ ನಿತ್ಯ ದಿನಪತ್ರಿಕೆಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ...