ಕೊಟ್ಟಿಗೆಹಾರ: ನಿಡುವಾಳೆಯ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ನವೆಂಬರ್ 23ರಂದುಕಾರ್ತೀಕ ದೀಪೋತ್ಸವ ನಡೆಯಲಿದೆ. ಸಂಜೆ 7:30 ರಿಂದ ದೀಪೋತ್ಸವ ಆರಂಭಗೊಳ್ಳಲಿದ್ದು, ದೀಪೋತ್ಸವದ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಲಿದ್ದು ದೇವಸ್ಥಾನದ ಆವರಣವನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿದೆ. ...