ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಪುತ್ರಿ ಧೃತಿ ವಿದೇಶದಿಂದ ಆಗಮಿಸಿದ್ದು, ತಂದೆಯ ಮೃತದೇಹದ ಎದುರು ಭಾವುಕರಾದ ಅವರು ಏನು ಮಾಡಬೇಕು ಎನ್ನುವುದು ತೋಚದೇ ತಂದೆಯ ತಲೆಯನ್ನು ನೇವರಿಸಿ, ನಮಸ್ಕರಿಸಿದರು. ತೀವ್ರ ನೋವಿನಿಂದ ತಮ್ಮ ತಾಯಿಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ತಂದೆಯ ಪಾರ್ಥಿವ ಶರೀರವ...