ಚೆನ್ನೈ: ಸಾಕು ಪ್ರಾಣಿಗಳು ಮನುಷ್ಯನನ್ನು ಎಷ್ಟು ಪ್ರೀತಿಸುತ್ತವೆ ಎಂದರೆ, ಸಾಕು ಕೂಡ ಆ ಮನೆಯ ಒಬ್ಬ ಸದಸ್ಯನಂತೆ ಬಹಳಷ್ಟು ಮನೆಗಳಲ್ಲಿ ಉಪಚರಿಸಲ್ಪಡುತ್ತದೆ. ಸಾಕು ಪ್ರಾಣಿ ಸತ್ತಾಗ ಮನೆ ಮಂದಿ ಪಡುವ ನೋವು ಅಷ್ಟಿಷ್ಟಲ್ಲ. ಕೆಲವರು ತಮ್ಮ ಪ್ರೀತಿ ಪಾತ್ರವಾದ ನಾಯಿ, ಬೆಕ್ಕು ಸಾವನ್ನಪ್ಪಿದರೆ ಅದರ ನೋವನ್ನು ಮರೆಯಲು ವರ್ಷಾನುಗಟ್ಟಲೆ ಪ್ರಯತ್...