ಧಮ್ಮಪ್ರಿಯಾ, ಬೆಂಗಳೂರು ಒಬ್ಬ ವ್ಯಕ್ತಿಯ ಬಗ್ಗೆ ಒಂದು ವಿಚಾರದ ಬಗ್ಗೆ ಒಂದು ವಸ್ತುವಿನ ಬಗ್ಗೆ ಒಂದು ಸ್ಥಳದ ಬಗ್ಗೆ ನಾವು ಒಮ್ಮೆ ಚರ್ಚೆಗೆ ಕುಳಿತಾಗ ನಮ್ಮ ಆಲೋಚನೆಯ ಕ್ರಮಗಳೇ ವಿಭಿನ್ನವಾಗಿರುತ್ತವೆ ಎಂದರೆ ತಪ್ಪಾಗಲಾರದು. ನಾವು ಮಂಡಿಸುವ ವಿಚಾರಗಳು ಬೇರೊಬ್ಬರ ಚಿಂತನೆಯ ಮಂಥನದಲ್ಲಿ ವಿಮರ್ಶೆಗಳಿಗೆ ಒಳಪಟ್ಟರೆ, ಬೇರೆಯವರ ಮಂಡನಾ ಕ...