2011-12 ರಲ್ಲಿ ಔಟ್ ಲುಕ್ ಪತ್ರಿಕೆ ಸಿ ಎನ್ ಎನ್ -ಐಬಿಎನ್, ಹಿಸ್ಟರಿ -18 ಮತ್ತು ಬಿಬಿಸಿ ಚಾನಲ್ ಗಳ ಸಹಯೋಗದೊಂದಿಗೆ ಒಂದು ಬೃಹತ್ ಸಮೀಕ್ಷೆ ಹಮ್ಮಿಕೊಂಡಿತ್ತು. ಆ ಸಮೀಕ್ಷೆ "ದಿ ಗ್ರೇಟೆಸ್ಟ್ ಇಂಡಿಯನ್ ಆಫ್ಟರ್ ಮಹಾತ್ಮ ಗಾಂಧಿ" ಎಂಬುದಾಗಿತ್ತು. ರಾಷ್ಟ್ರಪಿತ ಎಂದು ಮಹಾತ್ಮ ಗಾಂಧಿಯವರು ಅದಾಗಲೇ ಕರೆಯಲ್ಪಟ್ಟಿದ್ದರಿಂದ ಗಾಂಧೀಜಿಯವರ ಹೆಸರನ...