ಮೊನ್ನೆ ಒಂದು ಮದುವೆ ಸಮಾರಂಭಕ್ಕೆ ನನ್ನ ಶ್ರೀಮತಿಯವರು ಹೊಸ ಚಿನ್ನದ ಸರವೊಂದನ್ನು ಮಾಡಿಸಿ ಹಾಕಿಕೊಂಡು "ಹೇಗಿದೆ?" ಎಂದರು. ನಾನು "ಸೂಪರ್" ಎಂದೇ. ಹಾಗೆಯೇ ಅವರಿಗೆ ತಕ್ಕನಾಗಿ ನಾನು ಕೂಡ ಒಂದು ಬ್ಲೇಜರ್, ಶೂ ಧರಿಸಿ ಮದುವೆಗೆ ತಯಾರಾದೆ. ಮಕ್ಕಳು ಅಷ್ಟೇ, ಅಷ್ಟೇ ಗ್ರ್ಯಾಂಡ್ ಆಗಿರುವ ಬಟ್ಟೆಗಳನ್ನು ತೊಟ್ಟು ಮದುವೆಗೆ ಸಿದ್ಧರಾದರು. ನಾವೊಬ್ಬರ...