ಬೆಂಗಳೂರು: ಜನರ ತೆರಿಗೆ ಹಣ ಪಡೆದು ಸರಿಯಾದ ರಾಷ್ಟ್ರೀಯ ಹೆದ್ದಾರಿ ಮಾಡುವ ಯೋಗ್ಯತೆ ಇಲ್ಲದ ಸರ್ಕಾರ ಜನರ ಸುಗಮ ಸಂಚಾರಕ್ಕೆ ಆಗಾಗ ತಡೆಯಾಗುತ್ತಿದೆ. ಜನರಂತೂ ನಾನು ಆ ಪಕ್ಷ, ನೀನು ಈ ಪಕ್ಷ ಎಂದು ಹೊಡೆದಾಡುತ್ತಿರುವುದರ ನಡುವೆಯೇ ಜನರ ಪ್ರಾಣ ಹಿಂಡುವ ಜಿಗಣೆಗಳಂತೆ ಟೋಲ್ ಸಂಗ್ರಹ ಗುತ್ತಿಗೆ ಕಂಪೆನಿಗಳು ವರ್ತಿಸುತ್ತಿವೆ. ಈಗಾಗಲೇ ಟೋಲ್ ಸಂ...