ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಪ್ರೀತಿಪೂರ್ವಕವಾಗಿ ಕೋರುತ್ತೇನೆ. ಕ್ರಿಸ್ಮಸ್ ನಮಗೆ ನೀಡುವ ಸಂದೇಶ ಹಲವು. ಆ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿ ಅವುಗಳಿಗೆ ಅನುಸಾರವಾಗಿ ಜೀವಿಸುವಾಗ ಮಾತ್ರ ನಮ್ಮ ಆಚರಣೆಗಳು ಸಫಲವಾಗುತ್ತದೆ. ಕ್ರಿಸ್ತನ ಜನನದ ಸಂದೇಶ ಮೊದಲು ಲಭಿಸಿದ್ದು ಹೊಲದಲ್ಲಿ ಕುರಿಮಂದೆಯನ್ನು ಕಾಯುತ್ತಿದ್ದ ಕುರುಬರ...