ನಮ್ಮ ದೇಹದ ಜೀವ ಕೋಶಗಳಿಗೆ ಆಮ್ಲಜನಕ ಅತ್ಯಾವಶ್ಯಕವಾಗಿದೆ. ನಮ್ಮ ದೇಹಕ್ಕೆ ಆಮ್ಲಜನಕವನ್ನು ತಲುಪಿಸುವ ಪ್ರಮುಖ ಕೆಲಸವನ್ನು ಹಿಮೋಗ್ಲೋಬಿನ್ ಮಾಡುತ್ತದೆ. ಹೀಗಾಗಿ ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದರೆ, ನಮಗೆ ಹಲವು ರೋಗಗಳ ಅನುಭವಗಳಾಗುತ್ತವೆ. ರಕ್ತದಲ್ಲಿ ಹಿಮೋಗ್ಲೋಬಿನ್ ನ ಮಟ್ಟ ಕಡಿಮೆಯಾದರೆ, ರಕ್ತ ಹೀನತೆ ಉಂಟಾಗುತ್ತದೆ. ಇ...