ಸಾರ್ವಜನಿಕ ವಲಯದಲ್ಲಿ ಕಾಡುತ್ತಿರುವ ಬೌದ್ಧಿಕ ದಾರಿದ್ರ್ಯ ಸಮಾಜಕ್ಕೆ ಮಾರಕವಾಗುತ್ತದೆ ನಾ ದಿವಾಕರ ನಾಗರಿಕ ಜಗತ್ತು ಎಂದ ಕೂಡಲೇ ನಮ್ಮ ಮನಸ್ಸಿಗೆ ಥಟ್ಟನೆ ಹೊಳೆಯುವುದು ಆಧುನಿಕ ನಾಗರಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡ ಒಂದು ಸಮಾಜ. ಈ ಮೌಲ್ಯಗಳು ಯಾವುವು ಎಂಬ ಪ್ರಶ್ನೆ ಎದುರಾದಾಗ ನಮ್ಮ ಪ್ರತಿಕ್ರಿಯೆ ಸಾಪೇಕ್ಷವಾಗುವುದೇ ಅಲ್ಲದೆ ನಿ...