ಖ್ಯಾತ ನಟ ಸೂರ್ಯ ಅಭಿನಯದ ಪಂಚ ಭಾಷೆಗಳಲ್ಲಿ ತಯಾರಾಗಿರುವ ಜೈಭೀಮ್ ಸಿನೆಮಾ ನೋಡಿದೆ. ಅದನ್ನು ಸಿನಿಮಾ ಎಂಬ ಮೂರಕ್ಷರದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಬದುಕು ಎನ್ನಬಹುದು, ವಾಸ್ತವ ಎನ್ನಬಹುದು. ಇನ್ನೊಂದಷ್ಟು ಅಕ್ಷರದ ಪದಗಳಲ್ಲಿ ಹೇಳುವುದಾದರೆ ನ್ಯಾಯ, ಸಮಾನತೆ... ಹೀಗೆ ಪದಗಳ ಸಾಲು ಸಾಲು ಚಿತ್ರಕ್ಕೆ ಅನ್ವರ್ಥವಾಗಿ ಸಿಗುತ್ತ ಸಾಗುತ್ತವೆ. ...