ಬೆಂಗಳೂರು: ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುವ ಮೂಲಕ ಹೊಸ ಚರ್ಚೆಗೆ ಕಾರಣರಾಗಿದ್ದಾರೆ. ತೆನೆ ಇಳಿಸಿ ಕೈ ಹಿಡಿಯುತ್ತಾರಾ? ಜಿ.ಟಿ.ದೇವೇಗೌಡ ಅವರ ಹಾದಿಯನ್ನೇ ಹಿಡಿಯುತ್ತಾರಾ? ಎನ್ನುವ ಪ್ರಶ್ನೆಗಳಿಗೆ ಇದೀಗ ಈ ಭೇಟಿ ಕಾರಣವಾಗಿದೆ. ಶ್ರೀನಿವಾಸ್ ಗೌಡರ ವಿರುದ್ಧ ಕ...