ದಕ್ಷಿಣ ಕನ್ನಡದಲ್ಲಿ ಈ ಹಿಂದೆ ನಡೆದ ಹಲವು ಅಪರಾಧ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಆರೋಪಿಗಳ ಪತ್ತೆಗೆ ಸಹಕರಿಸುತ್ತಿದ್ದ ಶ್ವಾನದಳದ ಸದಸ್ಯೆಯಾಗಿದ್ದ ಜ್ವಾಲಾ ಕಿಡ್ನಿ ವೈಫಲ್ಯಕ್ಕೊಳಗಾಗಿ ಸಾವಿಗೀಡಾಗಿದೆ. ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಮೈದಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಬಿಳಿ ವಸ್ತ್ರದಲ...