ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಆವರಣದೊಳಗೆ ಶನಿವಾರ ಭಕ್ತರು ಮತ್ತು ದೇವಾಲಯದ ಕೆಲವು ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ. ದೇವಳದ ನಾಲ್ವರು ಸಿಬ್ಬಂದಿ ಮತ್ತು ಇಬ್ಬರು ಭಕ್ತರು ಪರಸ್ಪರ ತಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಶನಿವಾರ ಸಂಜೆ ದೇವಾಲಯದ ಗರ್ಭಗುಡಿಯಲ್ಲಿ 'ಆರತಿ' ನಡೆಯುತ್ತಿರುವಾಗ ಈ ಘಟನೆ ನಡ...