ತೀವ್ರ ಹಸಿವಿನ ಸಂದರ್ಭದಲ್ಲಿ ಒಂದು ಖರ್ಜೂರ ಸೇವಿಸಿದರೆ, ಸಾಕು. ಮನುಷ್ಯನ ದೇಹದ ಅರ್ಧ ಆಯಾಸವನ್ನು ಹೋಗಲಾಡಿಸುವಷ್ಟು ಶಕ್ತಿ ಅದರಲ್ಲಿದೆ. ಸುಮಾರು 500ರಕ್ಕೂ ಹೆಚ್ಚು ವಿಧದ ವಿವಿಧ ಖರ್ಜೂರಗಳಿವೆ. ಈ ಖರ್ಜೂರಗಳಲ್ಲಿ ಮನುಷ್ಯನ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ, ಸೋಡಿಯಂ, ಮೆಗ್ನೀಷಿಯಮ್ ಮತ್ತು ಕಬ್ಬಿಣದ ಅಂಶ ಸೇರಿದಂತೆ ವಿವಿಧ ಅಂಶಗಳಿವೆ. ...