ಮೂತ್ರಪಿಂಡಗಳು ಹಾನಿಯಾದರೆ, ಮನುಷ್ಯನ ಆಯುಷ್ಯ ಕಳೆದು ಹೋದಂತೆ. ಹಾಗಾಗಿ ಮೂತ್ರಪಿಂಡಗಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವುದು ಅವಶ್ಯಕ. ನಮ್ಮ ದಿನಚರಿಗಳು, ಆಹಾರಗಳು ನಮ್ಮ ದೇಹದ ಅಂಗಾಂಗಗಳ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ನಡಿಗೆ, ಸೈಕ್ಲಿಂಗ್, ಓಟ, ಡಾನ್ಸ್ ಮೊದಲಾದ ಚಟುವಟಿಕೆಗಳು ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ...