ಪೇಶ್ವೆ ಸಾಮ್ರಾಜ್ಯಕ್ಕೆ ಚಮರಗೀತೆ ಹಾಡಿದ ಭೀಮ ಕೋರೆಗಾಂವ್ ಕದನ 1817 ಡಿಸೆಂಬರ್ 31 ರ ರಾತ್ರಿ ಕ್ಯಾಪ್ಟನ್ ಸ್ಟಂಡನ್ ನೇತೃತ್ವದಲ್ಲಿ ಬಾಂಬೆ ಇನ್ಪೆಂಟ್ರಿಯ ಮೊದಲ ಬೆಟಾಲಿಯನ್ ನ ಸುಮಾರು 750 ಯೋಧರು ಇವರಲ್ಲಿ 500 ಮಹಾರ್ ದಲಿತರು ಮತ್ತು 250 ಉಳಿದ ಜಾತಿ ಸಮುದಾಯದ ಯೋಧರಾಗಿದ್ದರು ಇಡೀ ರಾತ್ರಿ 27 ಮೈಲುಗಳ ಕಾಲ್ನಡಿಗೆಯಲ್ಲಿ ಶಿರೂರ್ನಿಂದ ಹ...