ನವದೆಹಲಿ: ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಸೋನಿಪತ್ ಹಾಗೂ ಮಹೇಂದ್ರಗಢ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 7 ಜನರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮಹೇಂದ್ರಗಢ ಜಿಲ್ಲೆಯ ಮೊಹಲ್ಲಾ ಧಾನಿಯ ಗಣೇಶ ಮಂಡಲದಿಂದ ಗಣೇಶ್ ವಿಸರ್ಜನೆ ವೇಳೆ ಕಾಲುವೆಯಲ್ಲಿ ಭಕ್ತರು ಕೊಚ್ಚಿ ಹೋಗಿದ್ದು, ನಾಲ್ವರು ಸಾವನ್...
ಛತ್ತರ್ ಪುರ(ಮಧ್ಯಪ್ರದೇಶ): ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿಯನ್ನು ಪೊಲೀಸರು ಇಡೀ ರಾತ್ರಿ ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡು, ಥಳಿಸಿ, ಪ್ರಕರಣವನ್ನು ಹಿಂದೆಗೆಯುವಂತೆ ಬೆದರಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಛತ್ತರ್ ಪುರ ನಗರದಲ್ಲಿ ನಡೆದಿದೆ. 13 ವರ್ಷ ವಯಸ್ಸಿನ ಸಂತ್ರಸ್ತ ಬಾಲಕಿ ಆಗಸ್ಟ್ 27ರಂದು ಆಟವಾಡಲು ಮನೆಯಿಂದ ಹೊರಗೆ ಹೋಗಿದ...
ಲಕ್ನೋ: ಉತ್ತರ ಪ್ರದೇಶದ ಗೋರಖ್ಪುರದ ರೈಲು ನಿಲ್ದಾಣದಲ್ಲಿ ಬುಧವಾರ ರಾತ್ರಿ 25 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ಅಪಹರಿಸಿದ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಾರಾಜ್ಗಂಜ್ ಜಿಲ್ಲೆಯವರಾದ ಮಹಿಳೆ, ಧರ್ಮಶಾಲಾ ಬಜಾರ್ ಸೇತುವೆಯ ಬಳ...
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದು, ಘಟನೆಯಿಂದ ಆಕ್ರೋಶಗೊಂಡ ಜನರು ತೀವ್ರ ಪ್ರತಿಭಟನೆ ನಡೆಸಿದ್ದು, ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಪ್ರತಿಭಟನಾಕಾರರನ್ನು ತಡೆಯಲು ಬಂದ ಪೊಲೀಸ್ ಜೀಪನ್ನು ಜಗ್ಗಾಡಿದ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರ...
ಬೆಂಗಳೂರು: ರಾಜ್ಯ ಸರ್ಕಾರದ ಜನೋತ್ಸವ ಕಾರ್ಯಕ್ರಮ ಎರಡು ಬಾರಿ ರದ್ದಾಗಿದ್ದು, ಮೂರನೇ ಬಾರಿಗೆ ಜನೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಮುಂದಿನ ಬಾರಿ ಯಾವುದೇ ಅಡಚಣೆ ಉಂಟಾಗ ಬಾರದು ಎಂಬ ನಿಟ್ಟಿನಲ್ಲಿ 9 ಮಂದಿ ಪುರೋಹಿತರಿಂದ ಗಣಹೋಮ ಮಾಡಿಸಲಾಗಿದೆ. ದೊಡ್ಡಬಳ್ಳಾಪುರದ ದೇವನಹಳ್ಳಿ ರಸ್ತೆ ಬಳಿ ಜನೋತ್ಸವ ಕಾರ್ಯಕ್ರಮ ನ...
ಮಂಗಳೂರು: ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್ ಆಗಿ ಬಿಜೆಪಿಯ ಹಿರಿಯ ಕಾರ್ಪೊರೇಟರ್ ಜಯಾನಂದ ಅಂಚನ್ ಆಯ್ಕೆಯಾಗಿದ್ದಾರೆ. ಉಪ ಮೇಯರ್ ಆಗಿ ಬಿಜೆಪಿಯ ಕಾರ್ಪೊರೇಟರ್ ಪೂರ್ಣಿಮಾ ಆಯ್ಕೆಯಾದರು. ಇಂದು ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಇಬ್ಬರು ಶಾಸಕರು ಸೇರಿದಂತೆ ಉಪಸ್ಥಿತರಿದ್ದ ಒಟ್ಟು ಮತದಾರರಲ್ಲಿ 46 ಮಂದಿ ಜಯಾನಂದ ಪರ ಮತ ಚಲಾಯಿಸಿದರು. ...
ಕಾರ್ಕಳ: ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆಯೊಂದು ದಾಳಿ ನಡೆಸಿ ಪರಿಣಾಮ ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮುಲ್ಲಡ್ಕದ ರಾಜಶ್ರೀ ರೈಸ್ ಮಿಲ್ ಬಳಿಯ ಕೃಷ್ಣ ಶೆಟ್ಟಿ ಎಂಬವರ ಮೇಲೆ ಚಿರತೆ ದಾಳಿ ನಡೆಸಿದೆ ಎನ್ನಲಾಗಿದೆ. ಚಿರತೆ ದಾಳಿಯಿಂದ ಕೃಷ್ಣ ಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ...
ಹೈದರಾಬಾದ್: ಪುತ್ರಿಯ ಜನ್ಮದಿನದಂದೇ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಆನ್ ಲೈನ್ ಆ್ಯಪ್ ನ ಬೆದರಿಕೆಯಿಂದ ಬೇಸತ್ತು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಕೊಲ್ಲಿ ದುರ್ಗಾರಾವ್ ಹಾಗೂ ಪತ್ನಿ ರಮ್ಯಾ ಲಕ್ಷ್ಮೀ ಆತ್ಮಹತ್ಯೆಗೆ ಶರಣಾದವರು ಎಂದು ಗುರುತಿಸಲಾಗಿದೆ. ದುರ್ಗಾ...
ಬೆಂಗಳೂರು: ಗಣೇಶೋತ್ಸವದ ಮೆರವಣಿಗೆಯಲ್ಲಿ ಯುವಕನೋರ್ವ ಚಾಕು ಹಿಡಿದು ಗಣೇಶನ ವಿಗ್ರಹಕ್ಕೆ ಧಮ್ಕಿ ಹಾಕಿರುವ ಘಟನೆ ಯಶವಂತಪುರ ಬಳಿಯ ದೇವರಾಯಪಾಳ್ಯದಲ್ಲಿ ನಡೆದಿದೆ. ದೇವರಾಯಪಾಳ್ಯದಲ್ಲಿ ನಿನ್ನೆ ರಾತ್ರಿ ವೇಳೆ ಗಣೇಶೋತ್ಸವ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಚಾಕು ಹಿಡಿದುಕೊಂಡು ಬಂದ ಯುವಕ ವಿಚಿತ್ರವಾಗಿ ವರ್ತಿಸಿದ್ದು, ಚಾಕು ಹಿಡಿದು ...
ಕಲಬುರಗಿ: ಗಣೇಶೋತ್ಸವದಲ್ಲಿ ಕರ್ತವ್ಯ ನಿರತರಾಗಿದ್ದ ಹೆಡ್ ಕಾನ್ಸ್’ಸ್ಟೇಬಲ್ ವೊಬ್ಬರು ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಸ್ಟೇಬಲ್ ಆಗಿದ್ದ ಗೊಬ್ಬುರು ಬಿ ಗ್ರಾಮದ ನಿವಾಸಿ ಕಲ್ಯಾಣಿ ಗುಗ್ಗರಿ(45) ಮೃತಪಟ್ಟವರು ಎಂದು ಗುರುತಿಸಲಾಗಿದೆ....