ಬೆಂಗಳೂರು: ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿಯು ಡೊಂಕಾಗುತ್ತಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ. ರಷ್ಯಾ- ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿ ಮೋದಿ ಸರ್ಕಾರ ಕೈಗೊಂಡಿರುವ ನಿಲುವಿನ ಬಗ್ಗೆ ವ್ಯಂಗ್ಯ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಕೈಗೊಳ್ಳಲಾದ ನಿರ್ಣಯದಿಂ...
ಮಂಗಳೂರು: ಮಂಗಳೂರಿನ ಏರ್ಪೋರ್ಟ್ ನಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಆದಿತ್ಯ ರಾವ್ಗೆ ಮಂಗಳೂರಿನ ನಾಲ್ಕನೇ ಜಿಲ್ಲಾ ನ್ಯಾಯಾಲಯ ಪ್ರತ್ಯೇಕ ಎರಡು ಶಿಕ್ಷೆ ಪ್ರಮಾಣವನ್ನು ವಿಧಿಸಿ ತೀರ್ಪು ಪ್ರಕಟಿಸಿದೆ. 2020ರ ಜ. 20ರಂದು ಮಂಗಳೂರಿನ ಏರ್ಪೋರ್ಟ್ ಗೆ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯ...
ಮಂಡ್ಯ: ಮಂಡ್ಯದ ಮದ್ದೂರು ಪಟ್ಟಣದ ಎಲ್ಐಸಿ ಕಚೇರಿ ಮುಂಭಾಗ ಬಳಿ ಪಿಲ್ಲರ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿ ಉರಿದು ಚಾಲಕ ಸಜೀವ ದಹನವಾಗಿರುವ ಘಟನೆ ನಡೆದಿದೆ. ಬಿಡದಿಯಿಂದ ಮೈಸೂರಿಗೆ ತೆರಳುತ್ತಿದ್ದ ಲಾರಿ ಎಲ್ಐಸಿ ಕಚೇರಿ ಬಳಿ ಪಿಲ್ಲರ್ ಗೆ ಡಿಕ್ಕಿಯಾಗಿದೆ. ಟಿಪ್ಪರ್ ಲಾರಿ ಮುಂದಿನ ಭಾಗ ನಜ್ಜುಗುಜ್ಜಾದ ಹಿನ್ನೆಲೆಯಲ...
ಬೆಂಗಳೂರು : ಹಿಜಾಬ್ ಧಾರ್ಮಿಕ ಅಚರಣೆ ಅಲ್ಲ ಎಂಬ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಇಂದು ಮುಸ್ಲಿಂ ಸಂಘಟನೆಯಾದ ಅಮಿರ್-ಇ-ಷರಿಯತ್ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಹೈಕೋರ್ಟ್ ತೀರ್ಪಿನ ಬಗ್ಗೆ ಮುಸ್ಲಿಂ ಧರ್ಮಗುರುಗಳು ಚರ್ಚೆ ನಡೆಸಿದ್ದು ಈ ಸಭೆಯಲ್ಲಿ ಮುಖಂಡ ಸಗೀರ್ ಅಹ್ಮದ್ ಅವರು, ಗುರುವಾರ ಸ್ವಯಂ ಪ್ರೇರಿತವಾಗಿ ಕರ್ನಾಟಕ ಬಂ...
ಗುವಾಹಟಿ: ಅಸ್ಸಾಂ ಪೊಲೀಸರು 24 ಗಂಟೆಗಳಲ್ಲಿ ಇಬ್ಬರು ಅತ್ಯಾಚಾರ ಆರೋಪಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಏಳು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪದಲ್ಲಿ ಅಸ್ಸಾಂ ಪೊಲೀಸರು ಬುಧವಾರ ಆರೋಪಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಆರೋಪಿ ರಾಜೇಶ್ ಮುಂಡಾ (38) ಮಜ್ಬತ್ ನಲ್ಲಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯ...
ತುಮಕೂರು: ತುಮಕೂರಿನ ಹೊಟೇಲ್ವೊಂದರಲ್ಲಿ ಪತ್ನಿಯ ಕಾಲನ್ನೇ ಪತಿ ಕತ್ತರಿಸಿರುವ ಘಟನೆ ಬಗ್ಗೆ ಇಂದು ಬೆಳಗ್ಗೆ ವರದಿಯಾಗಿದೆ. ಆರೋಪಿಯನ್ನು ಗದಗ ಮೂಲದ ಬಾಬು (34) ಎಂದು ಗುರುತಿಸಲಾಗಿದ್ದು, ಅನಿತಾ ಗಾಯಗೊಂಡ ಮಹಿಳೆಯಾಗಿದ್ದಾಳೆ. ಆರೋಪಿ ಬಾಬು ನಾಲ್ಕು ವರ್ಷದ ಹಿಂದೆ ಮಧುಗಿರಿ ಮೂಲದ ಅನಿತಾಳನ್ನು ಮದುವೆಯಾಗಿದ್ದ. ಆದರೆ ದಂಪತಿ ನಡುವೆ ಪದೇ...
ಬೆಳಗಾವಿ: ವಾಕಿಂಗ್ ಹೋದ ವ್ಯಕ್ತಿಯ ಮೇಲೆ ಖಾರದ ಪುಡಿ ಎರಚಿ, ಮಾರಾಕಾಸ್ತ್ರಗಳಿಂದ ಇರಿದು, ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಗ್ಗೆ ವರದಿಯಾಗಿದೆ. ರಾಜು ಮಲ್ಲಪ್ಪ ದೊಡ್ಡಬಣ್ಣವರ್ 45 ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ರಾಜು ಮೂವರನ್ನು ಮದುವೆಯಾಗಿದ್ದು, ಯಾರಿಗೂ ವಿಚ್ಛೇದನ ನೀಡಿಲ್ಲ. ಮದುವೆಯಾದ ವಿಚಾರ ಎಲ್ಲರಿಗೂ ತಿಳಿದಿತ...
ಲಕ್ನೋ: ಮದುವೆಗೆ ಹೆತ್ತವರು ಒಪ್ಪಿಗೆ ನೀಡಿಲ್ಲವೆಂದು ಅಪ್ರಾಪ್ತ ಮಗಳೊಬ್ಬಳು ಪ್ರಿಯಕರನ ಜೊತೆಗೂಡಿ ಹೆತ್ತವರನ್ನೇ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಬಿಜನೋರ್ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 17 ವರ್ಷದ ಹುಡುಗಿ 20 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದು, ಇವರ ಪ್ರೀತಿಗೆ ಹೆತ್ತವರು ಒಪ್ಪಿಗೆ ನೀಡಿಲ್ಲ. ಇದರಿಂದ ಕೋಪಗೊಂಡ ಇವರು...
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ರಾಜೀನಾಮೆ ನೀಡಲಾಗಿದೆ. ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪತನಗೊಂಡ ನಂತರ ಸೋನಿಯಾ ಗಾಂಧಿ ಅವರು ಪಿಸಿಸಿ ಅಧ್ಯಕ್ಷರನ್ನು ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. "ಕಾಂಗ್ರೆಸ್ ಅ...
ಚೀನಾದ ನಂತರ ದಕ್ಷಿಣ ಕೊರಿಯಾದಲ್ಲಿಯೂ ಕೋವಿಡ್ ಹಾವಳಿ ಹೆಚ್ಚುತ್ತಿದೆ. ಬುಧವಾರವೊಂದರಲ್ಲೇ ದೇಶದಲ್ಲಿ 4 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಂದು 4,00,741 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 76 ಲಕ್ಷ ದಾಟಿದೆ. ಚೀನಾದಾದ್ಯಂತ 13 ಕ್ಕೂ ಹೆಚ್ಚು ನಗ...