ಮಂಗಳೂರು: ಮಳಲಿ ಪೇಟೆ ಮಸೀದಿ ಪ್ರಕರಣ ತೀರ್ಪನ್ನು ಮಂಗಳೂರು ಸಿವಿಲ್ ನ್ಯಾಯಾಲಯವು ಆಗಸ್ಟ್ 1ಕ್ಕೆ ಮುಂದೂಡಿದೆ. ಸ್ಥಳೀಯರಾದ ಮನೋಜ್, ಧನಂಜಯ ಮತ್ತಿತರರು ಹೈಕೋರ್ಟ್ ಗೆಅರ್ಜಿ ಸಲ್ಲಿಸಿ ಸಿವಿಲ್ ನ್ಯಾಯಾಲಯವು ಮಳಲಿ ಮಸೀದಿ ಸಂಬಂಧ ಯಾವುದೇ ತೀರ್ಪು ನೀಡಲು ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಅವರ ಅರ್ಜಿಯನ್ನು ವಿಚಾರಣೆಗ...