ಬೆಂಗಳೂರು: ಈ ಬಾರಿಯ ಸ್ವಾತಂತ್ರ್ಯೋತ್ಸವ ಭಾಷಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ಕೇಳಿದ್ದಾರೆ. ಆದರೆ ನಲುಗುತ್ತಿರುವ ಜನಸಮುದಾಯಗಳ ಬಗ್ಗೆ, ನಾಡು ತಲುಪುತ್ತಿರುವ ದುರ್ಗತಿಯ ಬಗ್ಗೆಯೂ ಮಾತನಾಡುವಂತೆ ಒತ್ತಾಯಿಸಲು ಆಗಸ್ಟ್ 10ರಿಂದ 15ರವರೆಗೆ ‘ಮಾತಾಡಿ ಪ್ರಧಾನಿಗಳೇ ಮಾತನಾಡಿ’ ಎಂಬ ಆನ್ ಲೈನ್ ಅಭಿಯಾನ ನಡೆಯಲಿದೆ. ಸಾಮಾಜಿಕ ಜಾ...