ಮತಧಾರ್ಮಿಕ ಮೂಲಭೂತವಾದ ಮತ್ತು ಮತಾಂಧತೆ ದೇಶ ಭಾಷೆಗಳ ಗಡಿಯನ್ನು ಮೀರಿ ಬೆಳೆದಿರುವ ಒಂದು ಜಾಗತಿಕ ಸಮಸ್ಯೆ. ಕಳೆದ ಐದಾರು ದಶಕಗಳಲ್ಲಿ ಜಾಗತಿಕ ಬಂಡವಾಳಶಾಹಿಯು ತನ್ನ ಮಾರುಕಟ್ಟೆ ವಿಸ್ತರಣೆಗಾಗಿ ಉತ್ತೇಜಿಸುತ್ತಲೇ ಬಂದಿರುವ ಬಲಪಂಥೀಯ ರಾಜಕಾರಣದ ಒಂದು ಆಯಾಮವನ್ನು ಹಲವು ದೇಶಗಳಲ್ಲಿ ಹರಡಿರುವ ಬಲಪಂಥೀಯ ರಾಜಕಾರಣದಲ್ಲಿ ಮತ್ತು ಇದಕ್ಕೆ ಪೂರಕವಾಗ...