ಮೈಸೂರು: ಮಕ್ಕಳು ಜಗಳವಾಡಿದ ವಿಚಾರದಲ್ಲಿ ಪತಿಯು ಪತ್ನಿಗೆ ಬುದ್ಧಿವಾದ ಹೇಳಿದ್ದು, ಪತಿಯ ಈ ವರ್ತನೆಯಿಂದ ಬೇಸತ್ತು ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿಯು ಯಾವ ರೀತಿ ಬುದ್ಧಿ ಹೇಳಿದ್ದಾರೆ ತಿಳಿದಿಲ್ಲ. ಆದರೆ ಮಕ್ಕಳ ಗಲಾಟೆ ವಿಚಾರವಾಗಿ ಪತಿ-ಪತ್ನಿಯರ ನಡುವೆ ಕಲಹಕ್ಕೆ ಕಾರಣವಾಗಿದ್ದು, ದುರಂತ ಅಂತ್ಯವಾಗಿದೆ. ...